ಮಧುಗಿರಿ : ಮಹಿಳೆಯಿಂದಲೇ ಇಂದು ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲೂಕಿನ ಸಿದ್ದಾಪುರ ಗ್ರಾ.ಪಂ.ನ 3ನೇ ವಾರ್ಡಿನಲ್ಲಿ ಬೋವಿ, ಯಾದವ ಹಾಗೂ ಇತರೆ ಸಮೂದಾಯದ 52 ಕುಟುಂಬ ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಿಳೆಯರ ಮಾತಿಗೆ ಬೆಲೆ ಕೊಟ್ಟ ಕುಮಾರಸ್ವಾಮಿ ಹಿಂದೆ ಸಾರಾಯಿ ನಿಷೇಧ ಮಾಡಿದ್ದರು. ನಂತರ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ನೋವು ನೋಡಿಯೇ ರೈತರ ಸಾಲ ಮನ್ನಾಕ್ಕೆ ಕೈ ಹಾಕಿ 25 ಸಾವಿರ ಕೋಟಿಯಷ್ಟು ಸಾಲ ಮನ್ನಾ ಮಾಡಿದರು. ಈಗ ದುಡಿಯುವ ಕೈಗಳಿಗೆ ಉದ್ಯೋಗ ಹಾಗೂ ಅನ್ನ ಹಾಕುವ ಮಹಿಳೆಯರ ಕೈಗೆ ಶಕ್ತಿ ನೀಡಲು ರೈತ ಚೈತನ್ಯ ಹಾಗೂ ಸೀ ಶಕ್ತಿ ಸಾಲವನ್ನು ಮನ್ನಾ ಮಾಡಲು ಮುಂದಾಗಿದ್ದಾರೆ. ಹೆಣ್ಣನ್ನು ಗೌರವದಿಂದ ಕಾಣುವ ದಿನಗಳನ್ನು ಸೃಷ್ಟಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಕ್ಷೇತ್ರದ ಮಹಿಳೆಯರು ಕೂಡ ಕಳೆದ ಬಾರಿ ನನಗೆ ಅತಿಹೆಚ್ಚು ಮತಗಳನ್ನು ನೀಡಿ ಗೆಲುವು ತಂದು ಕೊಟ್ಟಿದ್ದೀರ. ಅದಕ್ಕಾಗಿ ನಾನು ಆಭಾರಿಯಾಗಿದ್ದು, ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಧೈರ್ಯವಾಗಿ ಓಡಾಡುವ, ಹಾಗೂ ಶಿಕ್ಷಣ ಪಡೆಯುವ ವಾತಾವರಣ ನಿರ್ಮಾಣ ಮಾಡಿದ್ದೇನೆ. ಇದು ನನಗೆ ತೃಪ್ತಿ ನೀಡಿದ್ದರೂ ನಮ್ಮ ಹೆಣ್ಣು ಮಕ್ಕಳು ಬೇರೆ ಕಡೆ ಕೆಲಸಕ್ಕೆ ಹೋಗುವ ಬದಲು ನಮ್ಮೂರಲ್ಲೇ ಕೆಲಸ ಮಾಡಲು ಈಗಾಗಲೇ ಕೈಗಾರಿಕಾ ವಲಯ ಆರಂಭವಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ನಂತರ ಎಲ್ಲರೂ ಇಲ್ಲಿಯೇ ಉದ್ಯೋಗದಲ್ಲಿ ತೊಡಗಬಹುದು. ಇಂದು ಕಾಂಗ್ರೆಸ್ ತೊರೆದು ಬಂದ ಎಲ್ಲ ಕುಟುಂಬಗಳಿಗೆ ಭರವಸೆ ನೀಡಲಿದ್ದು ಎಂತಹ ಸಂದರ್ಭದಲ್ಲೂ ನಿಮ್ಮನ್ನು ಕಡೆಗಣಿಸುವುದಿಲ್ಲ.
ಈ ಬಾರಿ ಜಿಲ್ಲಾಕೇಂದ್ರ ಶತಸಿದ್ಧ : ಕಳೆದ ಬಾರಿ ಕುಮಾರಸ್ವಾಮಿ ಸಿಎಂ ಆದಾಗ ಮಧುಗಿರಿ ಜಿಲ್ಲೆಗೆ ಮುಂದಾಗಿದ್ದೆ. ಆದರೆ ಕೈಗಾರಿಕಾ ವಲಯ ಮಂಜೂರು ಮಾಡಿದ ಕುಮಾರಸ್ವಾಮಿ ಜಿಲ್ಲೆ ಘೋಷಣೆ ಮಾಡುವಷ್ಟರಲ್ಲಿ ಕಾಂಗ್ರೆಸ್-ಬಿಜೆಪಿ ಸೇರಿ ಸರ್ಕಾರ ಬೀಳಿಸಿದರು. ಆದರೆ ಈ ಬಾರಿ ಕುಮಾರಸ್ವಾಮಿ ಸಿಎಂ ಆಗಲಿದ್ದು, ಮೊದಲ ಅವ„ಯಲ್ಲೇ ಜಿಲ್ಲಾಕೇಂದ್ರ ಘೋಷಿಸಿ, ಕೈಗಾರಿಕಾ ವಲಯದಲ್ಲಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಜು, ಸದಸ್ಯ ಚಂದ್ರಶೇಖರ್ ಬಾಬು ಮಾತನಾಡಿದರು.
ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಗ್ರಾ.ಪಂ. ಸದಸ್ಯ ಚೌಡಪ್ಪ, ಕಾರ್ಯಕ್ರಮದಲ್ಲಿ ಸಿದ್ದಾಪುರ ಗ್ರಾ.ಪಂ. ಸದಸ್ಯ ನರಸೀಯಪ್ಪ, ಮಾಜಿ ಅಧ್ಯಕ್ಷ ಅಂಜಿನಮೂರ್ತಿ, ಹುಲಿ ರಾಜಣ್ಣ, ಜಗದೀಶ್ ಯಾದವ್, ಪೂಜಾರ್ ರಾಮಣ್ಣ, ಗೌಡ ಚಿಕ್ಕಣ್ಣ, ವೀರಚಿಕ್ಕಣ್ಣ, ಶಿವಯ್ಯ,
ಮಧು, ಲಕ್ಷ್ಮೀ, ಜಯಕ್ಕ, ನಂದಿನಿ ಸೇರಿದಂತೆ 52 ಕುಟುಂಬದ ಸದಸ್ಯರು ಕಾಂಗ್ರೆಸ್ ತೊರೆದು ಜೆಡಿಎಸ್‍ಗೆ ಸೇರ್ಪಡೆಯಾದರು.
ವರದಿ ಮಧುಗಿರಿ ಬಾಲು ಪಣಿಂದ್ರ.
